• NETBALL

    Chamundi Vihar Outdoor Stadium, Mysore 13th to 16th October 2018

    Netball is a ball sport played by two teams of seven players. Its development, derived from early versions of basketball, began in England in the 1890s. By 1960, international playing rules had been standardised for the game, and the International Federation of Netball and Women's Basketball was formed. The rings have an internal diameter of 380 mm and are located 150 mm forward from the post. Games are played on a rectangular court with raised goal rings at each end. Each team attempts to score goals by passing a ball down the court and shooting it through its goal ring. During general play, a player with the ball can hold on to it for only three seconds before shooting for a goal or passing to another player. The winning team is the one that scores the most goals. Netball games are 60 minutes long. In 1995, netball became an International Olympic Committee recognised sport, but it has not been played at the Olympics.

    ನೆಟ್ಬಾಲ್: ನೆಟ್ಬಾಲ್ ಚೆಂಡಿನ ಕ್ರೀಡೆಯಾಗಿದ್ದು ಏಳೇಳು ಆಟಗಾರರುಳ್ಳ ಎರಡು ತಂಡಗಳಿಂದ ಇದನ್ನು ಆಡಲಾಗುತ್ತದೆ. ಬಾಸ್ಕೆಟ್ ಬಾಲ್ ಆಟದ ಹಲವು ರೂಪಗಳಿಂದ ಈ ಆಟ ಪ್ರೇರಿತವಾಗಿ ಅಭಿವೃದ್ಧಿಗೊಂಡಿತು ಹಾಗೂ ಈ ಪ್ರಕ್ರಿಯೆಯು ಇಂಗ್ಲೆಂಡ್ ನಲ್ಲಿ 1890 ರಲ್ಲಿ ಪ್ರಾರಂಭವಾಯಿತು. 1960 ರವರೆಗೆ ಈ ಆಟಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನಿಯಮಾವಳಿಗಳನ್ನು ರೂಪಿಸಲಾಯಿತು ಹಾಗೂ ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ನೆಟ್ಬಾಲ್ ಮತ್ತು ವುಮೆನ್'ಸ್ ಬಾಸ್ಕೆಟ್ ಬಾಲ್ ಗಳನ್ನು ಸ್ಥಾಪಿಸಲಾಯಿತು. ರಿಂಗುಗಳು ಆಂತರಿಕವಾದ 380 ಮಿ.ಮೀ ವ್ಯಾಸ ಹೊಂದಿದ್ದು ಪೋಸ್ಟ್ ನ ಮುಂಭಾಗದಲ್ಲಿ 150 ಮಿ.ಮೀ ಗಳಷ್ಟು ಅಂತರದಲ್ಲಿರುತ್ತವೆ. ಆಟವನ್ನು ಆಯತಾಕಾರದ ಅಂಗಳದಲ್ಲಿ ಆಡಲಾಗುತ್ತದೆ ಹಾಗೂ ಗೋಲ್ ಪೋಸ್ಟ್ ಗಳು ಎತ್ತರದಲ್ಲಿರುತ್ತವೆ. ಚೆಂಡನ್ನು ಒಬ್ಬರಿಗೊಬ್ಬರು ಪಾಸ್ ಮಾಡುವುದರ ಮೂಲಕ ಪ್ರತಿ ತಂಡ ಗೋಲ್ ಮಾಡಲು ಪ್ರಯತ್ನಿಸುತ್ತವೆ. ಸಾಮಾನ್ಯವಾಗಿ ಆಟಗಾರ ತನ್ನ ಬಳಿ ಬರುವ ಚೆಂಡನ್ನು ಕೇವಲ ಮೂರು ಸೆಕೆಂಡುಗಳಷ್ಟೆ ಹಿಡಿದುಕೊಂಡಿರಬೇಕು ನಂತರ ಅದನ್ನು ಗೋಲ್ ಪೋಸ್ಟ್ ಇಲ್ಲವೆ ಇತರೆ ಆಟಗಾರನಿಗೆ ಪಾಸ್ ಮಾಡಬೇಕು. ಹೆಚ್ಚು ಗೋಲ್ ಗಳಿಸುವ ತಂಡವು ಜಯಶಾಲಿಯಾಗುತ್ತದೆ. ನೆಟ್ಬಾಲ್ ಪಂದ್ಯಕ್ಕೆ ನಿಗದಿ ಪಡಿಸಲಾಗಿರುವ ಸಮಯ 60 ನಿಮಿಷಗಳು. 1995 ರಲ್ಲಿ ನೆಟ್ಬಾಲ್ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ ಪರಿಗಣಿಸಲ್ಪಟ್ಟ ಕ್ರೀಡೆಯಾಯಿತಾದರೂ, ಒಲಿಂಪಿಕ್ಸ್ ನಲ್ಲಿ ಅದನ್ನು ಆಡಲಾಗಿಲ್ಲ.  • More information


    Competition Director(s): H.S.Lokesh, 94813 84568 (M) [Amateur Netball Association of Karnataka]